ಅಭಿಪ್ರಾಯ / ಸಲಹೆಗಳು

ಇಲಾಖೆ ಕುರಿತು

ಡಯಟ್ ಸಂಸ್ಥೆಯು ಬೆಳೆದು ಬಂದ ಹಾದಿ

ತುಮಕೂರು ಜಿಲ್ಲೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆಯಿAದ ಕರ್ನಾಟಕದ ಪ್ರಸಿದ್ದ ಜಿಲ್ಲೆಗಳಲ್ಲಿ ಒಂದಾಗಿದೆ.“ಶಿಕ್ಷಣ ಕಾಶಿ” ಎಂದು ಪ್ರಖ್ಯಾತಿ ಪಡೆದಿರುವ ತುಮಕೂರು ಜಿಲ್ಲೆಯಲ್ಲಿ 1904 ರಲ್ಲಿ “ನಾರ್ಮಲ್ ಸ್ಕೂಲ್” ಎಂಬ ಹೆಸರಿನಿಂದ ಶಿಕ್ಷಕರ ತರಬೇತಿ ಸಂಸ್ಥೆಯು ಪ್ರಾರಂಭವಾಯಿತು. ಸೇವಾನಿರತ ಶಿಕ್ಷಕರ ಶಿಕ್ಷಣ ಕುರಿತಂತೆ ತರಬೇತಿ ನೀಡುವುದು. ಈ ತರಬೇತಿ ಸಂಸ್ಥೆಯ ಪ್ರಧಾನ ಗುರಿಯಾಗಿತ್ತು.ನಂತರ “ವರ್ನ್ಯಾಕ್ಯೂಲರ್ ಟ್ರೆನಿಂಗ್(Varnacular Training) ಕಾಲೇಜು ಎಂಬುದಾಗಿ “ನಾರ್ಮಲ್ ಸ್ಕೂಲ್”ನ್ನು ಮರುನಾಮಕರಣ ಮಾಡಲಾಯಿತು. ನಂತರ “ಶಿಕ್ಷಕರ ತರಬೇತಿ ಸಂಸ್ಥೆ” ಯಾಗಿ ಮಾರ್ಪಟ್ಟಿತು.ಶಿಕ್ಷಕರ ತರಬೇತಿ ಸಂಸ್ಥೆಯಾಗಿ ರೂಪುಗೊಂಡ ನಂತರ ಶಿಕ್ಷಕರ ಶಿಕ್ಷಣದ ಬಗ್ಗೆ ತರಬೇತಿ ನೀಡುವ ಅಧಿಕೃತ ಸಂಸ್ಥೆಯಾಗಿ ಶಿಕ್ಷಕ ಸಮುದಾಯವನ್ನು ವಿವಿಧ ಬಗೆಗಳಲ್ಲಿ ರೂಪಿಸುವ ಕಾರ್ಯವನ್ನು ಪ್ರಾರಂಭಿಸಿತು.


• ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದ್ದು ಆದರೆ ತರಬೇತಿ ಹೊಂದಿರದ ಶಿಕ್ಷಕರು ಜಿಲ್ಲೆಯಲ್ಲಿ ಹೆಚ್ಚಾಗಿದ್ದುದರಿಂದ ಅಂತಹ ಶಿಕ್ಷಕರನ್ನು ತರಬೇತುಗೊಳಿಸಲು ಆದ್ಯತೆ ನೀಡಿತ್ತು. ಇದು ಎರಡು ವರ್ಷಗಳ ತರಬೇತಿಯಾಗಿದ್ದು ಸೇವಾನಿರತ ಶಿಕ್ಷಕರಿಗೆ ಸಹಕಾರಿಯಾಗಿತ್ತು. ಸೇವಾನಿರತ ಶಿಕ್ಷಕರ ತರಬೇತಿಯನ್ನು ಶಿಕ್ಷಕರ ವಿದ್ಯಾರ್ಹತೆಯನ್ನು ಆಧಾರವಾಗಿಟ್ಟುಕೊಂಡು 2 ರೀತಿ ನೀಡಲಾಗುತ್ತಿತ್ತು.ಎಸ್.ಎಸ್.ಎಲ್.ಸಿ ಗಿಂತಕಡಿಮೆ ವಿದ್ಯಾರ್ಹತೆ ಹೊಂದಿರುವವರಿಗೆ 2 ವರ್ಷಗಳ ಶಿಕ್ಷಕರ ಶಿಕ್ಷಣದಲ್ಲಿ ತರಬೇತಿ ನೀಡುತಿದ್ದು ಈ ಕೋರ್ಸ್ ನ್ನು ಟಿ.ಸಿ.ಎಲ್( Teacher Certificate Lower) ಎಂದು ಕರೆಯಲಾಗುತ್ತಿತ್ತು. ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿಗೆ 2 ವರ್ಷಗಳ ತರಬೇತಿ ನೀಡುತ್ತಿದ್ದು ಟಿ.ಸಿ.ಹೆಚ್( Teacher Certificate Higher) ಎಂದು ಕರೆಯಲಾಗುತ್ತಿತ್ತು. 


• ತದನಂತರದಲ್ಲಿ ಸೇವಾಪೂರ್ವ ವಿಭಾಗವೂ ಪ್ರಾರಂಭಗೊoಡು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ವಿದ್ಯಾರ್ಥಿಗಳು ಶಿಕ್ಷಕರ ಶಿಕ್ಷಣದಲ್ಲಿ ತರಬೇತಿ ಹೊಂದಲು ಪ್ರಾರಂಭಿಸಿದರು. ಸೇವಾನಿರತ ಶಿಕ್ಷಕರು ಮತ್ತು ಸೇವಾಪೂರ್ವ ಪ್ರಶಿಕ್ಷಣಾರ್ಥಿಗಳು ಒಟ್ಟಾಗಿಯೇ ತರಬೇತಿ ಪಡೆಯಲು ಪ್ರಕ್ರಿಯೆ ಕೆಲವು ವರ್ಷಗಳ ಕಾಲ ಮುಂದುವರೆಯಿತು. ಜಿಲ್ಲೆಯಲ್ಲಿ ಸೇವಾನಿರತ ಶಿಕ್ಷಕರು ಸಂಪೂರ್ಣವಾಗಿ ತರಬೇತಿ ನೀಡುವ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ತದನಂತರ ಶಿಕ್ಷಕರ ತರಬೇತಿ ಸಂಸ್ಥೆಯು ಸರ್ಟಿಫಿಕೇಟ್ ಕೋರ್ಸಗಳನ್ನು ಪ್ರಶಿಕ್ಷರ್ಣಾರ್ಥಿಗಳಿಗೆ ನಡೆಸುವುದರ ಜತೆಗೆ ಸೇವಾನಿರತ ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸುವ ಸಲುವಾಗಿ ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ನಡೆಸುತ್ತಿತ್ತು. ರಜಾಅವಧಿಯಲ್ಲಿ ತರಬೇತಿ ಹೊಂದಿಲ್ಲದ ಶಿಕ್ಷಕರಿಗಾಗಿ ಸರ್ಟಿಫಿಕೇಟ್‌ ಕೋರ್ಸಗಳನ್ನು ಸಿ.ಸಿ.ವಿ.ಸಿ (contact cum vocational course) ಎಂಬ ಹೆಸರಿನಿಂದ ನಡೆಸಲಾಗುತ್ತಿತ್ತು. ಸಿ.ಸಿ.ವಿ.ಸಿ ಕೋರ್ಸ್ಗೆಗೆ ದಾಖಲಾದ ಶಿಕ್ಷಕರಿಗೆ ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿತ್ತು.ಹೀಗೆ ನಾರ್ಮಲ್ ಸ್ಕೂಲ್‌ನಿಂದ ಪ್ರಾರಂಭವಾದ ಸಂಸ್ಥೆಯು ಶಿಕ್ಷಕರ ತರಬೇತಿ ಸಂಸ್ಥೆಯಾಗಿ ರೂಪುಗೊ0ಡು ರಾ.ಶಿ.ನೀತಿ 1986 ಮತ್ತು 1992 ರ ಪಿ.ಓ.ಎ(programme of Action)  ಶಿಫಾರಸ್ಸಿನಂತೆ 19-1-1993 ರಿಂದ ಮೇಲ್ದರ್ಜೆಗೆ ಏರಿಸಲ್ಪಟ್ಟು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(DIET) ಎಂದು ಮರುನಾಮಕರಣಗೊಂಡಿತು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(DIET) ಈ ಕೆಳಕಂಡ ವಿಭಾಗಗಳನ್ನು ಹೊಂದಿದೆ.

1) ಸೇವಾ ಪೂರ್ವ ಶಿಕ್ಷಕರ ಶಿಕ್ಷಣ ವಿಭಾಗ

2)ಜಿಲ್ಲಾ ಸಂಪನ್ಮೂಲ ಘಟಕ

3)ಶೈಕ್ಷಣಿಕ ತಂತ್ರಜ್ಞಾನ ವಿಭಾಗ

4)ಪಠ್ಯಕ್ರಮ ಅಭಿವೃದ್ದಿ ಮತ್ತು ಮೌಲ್ಯಮಾಪನ

5)ಸೇವಾನಿರತ ಶಿಕ್ಷಕರ ತರಬೇತಿ

6) ಕ್ಷೇತ್ರಸಂವಾಹನ ,ನಾವಿನ್ಯತೆ  ಮತ್ತು ಸಮನ್ವಯ ವಿಭಾಗ

7)ಯೋಜನೆ ಮತ್ತು ನಿರ್ವಹಣೆ ,ಕಾರ್ಯಶಿಕ್ಷಣ ವಿಭಾಗ

ಡಯಟ್ ಸಂಸ್ಥೆಯು ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಗುಣಾತ್ಮಕತೆಗಾಗಿ ಶ್ರಮಿಸುತ್ತಾ ಸೇವಾಪೂರ್ವ ಹಾಗೂ ಸೇವಾನಿರತ ಶಿಕ್ಷಕರ ತರಬೇತಿಯನ್ನು ನಿರಂತರವಾಗಿ ನೀಡುವ ಶಿಕ್ಷಕರ ಶಿಕ್ಷಣದ ಪ್ರಾತಿನಿಧಿಕ ಸಂಸ್ಥೆಯಾಗಿದೆ.

 

ಸಂಸ್ಥೆ ಕುರಿತು

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಸಂಸ್ಥೆಯು (ಡಯಟ್) ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ, ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು, ವಿಜ್ಞಾನಕಾರ್ಯಕ್ರಮಗಳ ಉತ್ತೇಜಿಸಲು ಮತ್ತು ಶಾಲಾ ಶಿಕ್ಷಣದಲ್ಲಿ ಪಾಂಡಿತ್ಯ ಪೂರ್ಣನಾಯಕತ್ವವನ್ನು ಬೆಳೆಸುವ ಗುರಿಯೊಂದಿಗೆ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವ ವಿದ್ವತ್ಪೂರ್ಣ ಕಾರ್ಯಗಳಲ್ಲಿ ತೊಡಗಿದೆ. ಎಲ್ಲಾ ಮಕ್ಕಳನ್ನು ಉತ್ತಮ ಮಾನವರಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮಕರಾಗಲು ಅವಶ್ಯವಾಗಿ ಬೇಕಾದ ನಿಗದಿತ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಈ ಸಂಸ್ಥೆಯ ಪ್ರಮುಖ ಗುರಿಯಾಗಿದೆ.

 ಜಿಲ್ಲೆಯ ಶೈಕ್ಷಣಿಕ ಆಡಳಿತ ಮಾಹಿತಿ

ಶೈಕ್ಷಣಿಕ ಆಡಳಿತದ ಅನುಕೂಲತೆಗಾಗಿ ತುಮಕೂರು ಜಿಲ್ಲೆಯನ್ನು ದಕ್ಷಿಣ ಮತ್ತು ಉತ್ತರ ಶೈಕ್ಷಣಿಕ ಜಿಲ್ಲೆಗಳಾಗಿ ವಿಂಗಡಿಸಿದೆ. ತುಮಕೂರು ದಕ್ಷಿಣ ಜಿಲ್ಲೆಯು ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ದಿ ಅಡಿಯಲ್ಲಿ 6 ತಾಲ್ಲೂಕುಗಳು ಮತ್ತು ತುಮಕೂರು ಉತ್ತರ (ಮಧುಗಿರಿ) ಜಿಲ್ಲೆಯು ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ದಿ ಅಡಿಯಲ್ಲಿ 4 ತಾಲ್ಲೂಕುಗಳು. ಡಯಟ್‌ ವ್ಯಾಪ್ತಿಗೆ ಒಳಪಡುತ್ತವೆ.ತುಮಕೂರು ದಕ್ಷಿಣ ಜಿಲ್ಲೆಯ ಕೇಂದ್ರ ಕಚೇರಿ ತುಮಕೂರಿನಲ್ಲಿದ್ದು,ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ 1)ಚಿಕ್ಕನಾಯಕನಹಳ್ಳಿ, 2)ಗುಬ್ಬಿ, 3)ಕುಣಿಗಲ್, 4)ತುರುವೆಕೆರೆ, 5)ತಿಪಟೂರು ಮತ್ತು 6)ತುಮಕೂರು ತಾಲ್ಲೂಕುಗಳು ಹಾಗು ಮಧುಗಿರಿ ಶ್ಯೆಕ್ಷಣಿಕ ಜಿಲ್ಲಾ ವ್ಯಪ್ತಿಗೆ 1)ಕೊರಟಗೆರೆ 2)ಶಿರಾ 3)ಮಧುಗಿರಿ ಮತ್ತು 4)ಪಾವಗಡ ತಾಲ್ಲೂಕುಗಳು ಒಳಪಡುತ್ತವೆ.

 ಡಯಟ್‌ನ ಧ್ಯೇಯ ಮತ್ತು ಪ್ರಮುಖ ಚಟುವಟಿಕೆಗಳು :

 1. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವುದು.
 2. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತಗಳೆರಡೂ ಒಳಗೊಂಡಂತೆ ಜಿಲ್ಲೆಯಲ್ಲಿ ಶಿಕ್ಷಕರ ಶಿಕ್ಷಣ ತರಬೇತಿಯ ನಿರ್ವಹಣೆ (ಸೇವಾಪೂರ್ವ ಮತ್ತು ಸೇವಾನಿರತ ಶಿಕ್ಷಣ).ಜಿಲ್ಲೆಯಲ್ಲಿ ವಿಜ್ಞಾನ ಶಿಕ್ಷಣವನ್ನು ಪ್ರೋತ್ಸಾಹಿಸುವುದು.
 3. ಪಠ್ಯವಿಷಯ, ಶಿಕ್ಷಣಶಾಸ್ತ್ರ, ಶಿಕ್ಷಣದಲ್ಲಿ ರಂಗಕಲೆಯಂತಹ ನವೀನ ಪದ್ಧತಿಗಳ ಅಳವಡಿಕೆ, ಕಡಿಮೆ ವೆಚ್ಚದ-ವೆಚ್ಚರಹಿತ ಬೋಧನಾ ಕಲಿಕಾ ಸಾಮಗ್ರಿಗಳ ತಯಾರಿಕೆ ಮುಂತಾದ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವುದು.
 4. ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು.
 5. ವಿದ್ಯಾರ್ಥಿ ವೇತನಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದು.
 6. ಪ್ರೌಢಶಾಲಾ ಶಿಕ್ಷಕರ ಬೋಧನಾ ಅಗತ್ಯತೆಗಳನ್ನು ಗುರುತಿಸಿ, ಶಿಕ್ಷಕರ ಬೋಧನಾ ಕೌಶಲ್ಯಗಳನ್ನು ವೃದ್ಧಿಸುವುದು.
 7. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಹೆಚ್ಚಿಸುವುದು.
 8. ಶಿಕ್ಷಕ ತರಬೇತಿ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದು.
 9. ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ.

ಇತ್ತೀಚಿನ ನವೀಕರಣ​ : 26-05-2023 11:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತುಮಕೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080