ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ಪ್ರತಿಭ್ವಾನೇಷಣಾ ಪರೀಕ್ಷೆ & ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿವೇತನ ಯೋಜನೆ

ರಾಷ್ಟ್ರೀಯ ಪ್ರತಿಭ್ವಾನೇಷಣಾ ಪರೀಕ್ಷೆ

National Talent Search Examination (NTSE)

10ನೇ ತರಗತಿಯಲ್ಲಿ  ಅಭ್ಯಾಸಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (National Talent Search Examination, NTSE) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು NCERT, New Delhi, ರವರ ಮಾರ್ಗದರ್ಶನದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

NTSE ಪರೀಕ್ಷೆಗೆ ಅರ್ಹತೆ (Eligibility) :- :- ಪರೀಕ್ಷೆಗೆ ಅರ್ಜಿಹಾಕುವ ವರ್ಷದಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

NTSE ಪರೀಕ್ಷೆಯ ಉದ್ದೇಶಗಳು:

 • 10 ನೇತರಗತಿಯಲ್ಲಿಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನುಗುರುತಿಸುವುದು.
 • ಆಯ್ಕೆಯಾದವರಿಗೆ ಆರ್ಥಿಕ ನೆರವು ನೀಡಿ, ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು.
 • ಈ ಮೂಲಕ ಮಕ್ಕಳಲ್ಲಿ ಉತ್ತಮವಾಗಿ ದೇಶಸೇವೆ ಮಾಡುವ ಮನೋಭಾವ ಬೆಳೆಸುವುದು.

ಪರೀಕ್ಷೆಯು ಎರಡು ಹಂತದಲ್ಲಿ ನಡೆಯುತ್ತದೆ.

ಪ್ರಥಮಹಂತ:ಪ್ರಥಮ ಹಂತದ ಪರೀಕ್ಷೆಯನ್ನು ಪ್ರತಿವರ್ಷ ಸಾಮಾನ್ಯವಾಗಿ ನವೆಂಬರ್‌ ತಿಂಗಳಿನಲ್ಲಿ ನಡೆಸಲಾಗುತ್ತದೆ.

ಮೊದಲನೇ ಹಂತದ ಪರೀಕ್ಷೆಯು 2 ವಿಷಯಗಳನ್ನುಒಳಗೊಂಡಿರುತ್ತದೆ.ಅವುಗಳೆಂದರೆ,

 • ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ General Mental Ability Test (GMAT)

ಈ ಪತ್ರಿಕೆಯಲ್ಲಿ 100 ಬಹುಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ.ಪ್ರತಿಪ್ರಶ್ನೆಗೂ ಒಂದು ಅಂಕದಂತೆ 100 ಅಂಕಗಳು.ವಿದ್ಯಾರ್ಥಿಗಳು ಕಾರಣ ನೀಡುವ,ವಿಶ್ಲೇಷಿಸುವ ,ಸಂಶ್ಲೇಶಿಸುವ ಇತ್ಯಾದಿ ಸಾಮರ್ಥ್ಯಗಳನ್ನು ಅಳೆಯುವ ಪ್ರಶ್ನೆಗಳಿರುತ್ತವೆ.

 • ವ್ಯಾಸಂಗ ಪ್ರವೃತ್ತಿ ಪರೀಕ್ಷೆ: Scholastic Aptitude Test (SAT)

ಈಪತ್ರಿಕೆಯಲ್ಲಿ 100 ಅಂಕಗಳಿಗೆಒಟ್ಟು 100 ಬಹುಆಯ್ಕೆಪ್ರಶ್ನೆಗಳಿರುತ್ತವೆ.ಇವುಗಳಲ್ಲಿ 40 ಪ್ರಶ್ನೆಗಳುಸಮಾಜವಿಜ್ಞಾನ (ಇತಿಹಾಸ, ಭೂಗೋಳ, ಪೌರನೀತಿಮತ್ತುಅರ್ಥಶಾಸ್ತ್ರ್ರವಿಷಯಗಳನ್ನು) 40 ಪ್ರಶ್ನೆಗಳುಸಾಮಾನ್ಯವಿಜ್ಞಾನ (ಭೌತಶಾಸ್ತ್ರ, ರಾಸಾಯನಶಾಸ್ತ್ರ, ಮತ್ತುಜೀವಶಾಸ್ರ್ತ )ಮತ್ತು 20 ಪ್ರಶ್ನೆಗಳು (ಗಣಿತವಿಷಯವನ್ನುಆಧರಿಸಿರುತ್ತವೆ)

ಈ ವಿಷಯದ ಪರೀಕ್ಷೆಗೆ ಸಿದ್ಧವಾಗುವಾಗ ವಿದ್ಯಾರ್ಥಿಗಳು 10ನೇ ತರಗತಿಯ ಪಠ್ಯವಸ್ತು( State/CBSC/ ICSE, Syllabus) ಚೌಕಟ್ಟಿನಲ್ಲಿರುವ ವಿಷಯಗಳನ್ನುಅಧ್ಯಯನ ಮಾಡಬೇಕಾಗುತ್ತದೆ. ಪರೀಕ್ಷೆಬರೆದಒಟ್ಟುವಿದ್ಯಾರ್ಥಿಗಳಲ್ಲಿ State Rank ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದ್ವಿತೀಯ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

 

 

ದ್ವಿತೀಯಹಂತ (Second Phase)

ಪ್ರಥಮ ಹಂತದ ರಾಜ್ಯಮಟ್ಟದ ಪರೀಕ್ಷೆಯಲ್ಲಿಅರ್ಹತೆಗಳಿಸಿದ ವಿದ್ಯಾರ್ಥಿಗಳಿಗೆ National Council of Educational Research and Training, NCERT, New Delhi ರವರು ದ್ವಿತೀಯ ಹಂತದ ರಾಷ್ಟ್ರಮಟ್ಟದ ಪರೀಕ್ಷೆಯನ್ನು ನಡೆಸುತ್ತಾರೆ.ದ್ವಿತೀಯ ಹಂತದ ಪರೀಕ್ಷೆ ವಿವರಗಳಿಗೆ NCERT Website ನಲ್ಲಿ ವೀಕ್ಷಿಸುವುದು.

 

ವಿದ್ಯಾರ್ಥಿವೇತನ :ಅಂತಿಮವಾಗಿಆಯ್ಕೆಯಾದವಿದ್ಯಾರ್ಥಿಗಳಿಗೆ ಪಿ.ಯು.ಸಿ ( ಪ್ರಥಮಮತ್ತುದ್ವಿತೀಯ ) ಯಲ್ಲಿ ತಿಂಗಳಿಗೆ ರೂ 1,250 ಮತ್ತು ಪದವಿ ಹಂತದಲ್ಲಿ ರೂ 2,000 ಹಾಗೂ ಉನ್ನತವ್ಯಾಸಂಗದಲ್ಲಿ ವಿದ್ಯಾರ್ಥಿ ವೇತನ ಯು.ಜಿ.ಸಿ ನಿಯಮಾನುಸಾರ ನೀಡಲಾಗುತ್ತದೆ.

ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿವೇತನ ಯೋಜನೆ

(National Means- cum-Merit Scholarship) NMMS

8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (National Means cum Merit Scholarship Examination, NMMS) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನುನಡೆಸಲಾಗುತ್ತದೆ.

ಅರ್ಹತೆ (Eligibility) :

ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳಲ್ಲಿ ವ್ಯಾಸಂಗಮಾಡುತ್ತಿರುವ 8 ನೇ ತರಗತಿ ವಿದ್ಯಾರ್ಥಿಗಳು ಮಾತ್ರ NMMS ಪರೀಕ್ಷೆಗೆ ಅರ್ಹರಾಗಿರುತ್ತಾರೆ.ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಅನುದಾನದಿಂದ ನಡೆಯುವ ವಸತಿಯುತ ಶಾಲೆಗಳ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. (ಉದಾ: ಮೊರಾರ್ಜಿ, ನವೋದಯಶಾಲೆ ಕೇಂದ್ರಿಯವಿದ್ಯಾಲಯ, ಸೈನಿಕಶಾಲೆ, ಇತ್ಯಾದಿ)

ಯೋಜನೆಯ ಉದ್ದೇಶಗಳು :

 • 8 ನೇತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನುಗುರುತಿಸುವುದು.
 • ಗುರ್ತಿಸಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರಿಕೆಗೆ ವಿದ್ಯಾರ್ಥಿವೇತನ ನೀಡುವುದು( ಹಣಕಾಸಿನ ನೆರವು).
 • ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಡೆದು ಅವರ ವಿದ್ಯಾಭ್ಯಾಸ ಮುಂದುವರಿಕೆಗೆ ಪ್ರೇರೇಪಿಸುವುದು.

NMMS ಪರೀಕ್ಷೆಗೆಇರುವನಿ ಬಂಧನೆಗಳು :

 • ಪೋಷಕರ ವಾರ್ಷಿಕವರಮಾನ 1,50,000ಮೀರಿರಬಾರದು.
 • 7 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 55 ಅಂಕಗಳನ್ನು (ಅಥವಾಗ್ರೇಡ್) ಪಡೆದಿರಬೇಕು.
 • ಪ.ಜಾ/ಪ.ಪಂ ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ 5 ರಷ್ಟುಮೀಸಲಾತಿ ಇರುತ್ತದೆ.

ಆಯ್ಕೆಪ್ರಕ್ರಿಯೆ (Selection Procedure)

ಈ ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.

 • ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ General Mental Ability Test (GMAT)

ಈ ಪತ್ರಿಕೆಯಲ್ಲಿ 90 ಬಹು ಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ.ಪ್ರತಿಪ್ರಶ್ನೆಗೂ ಒಂದು ಅಂಕದಂತೆ 90 ಅಂಕಗಳು.ವಿದ್ಯಾರ್ಥಿಗಳು ಕಾರಣ ನೀಡುವ, ವಿಶ್ಲೇಷಿಸುವ ,ಸಂಶ್ಲೇಶಿಸುವ ಇತ್ಯಾದಿ ಸಾಮರ್ಥ್ಯಗಳನ್ನುಅಳೆಯುವ ಪ್ರಶ್ನೆಗಳಿರುತ್ತವೆ.

 • ವ್ಯಾಸಂಗ ಪ್ರವೃತ್ತಿ ಪರೀಕ್ಷೆ: Scholastic Aptitude Test (SAT)

ಈ ಪತ್ರಿಕೆಯಲ್ಲಿಒಟ್ಟು 90 ಬಹುಆಯ್ಕೆಪ್ರಶ್ನೆಗಳಿರುತ್ತವೆ.ಇವುಗಳಲ್ಲಿ 35 ಪ್ರಶ್ನೆಗಳು (ಸಾಮಾಜಿಕ ವಿಜ್ಞಾನ ವಿಷಯಗಳಾದ ಇತಿಹಾಸ ,ಭೂಗೋಳ, ಪೌರನೀತಿ ಮತ್ತುಅರ್ಥಶಾಸ್ತ್ರ್ರ ವಿಷಯಗಳನ್ನು) 35 ಪ್ರಶ್ನೆಗಳು (ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಮತ್ತುಜೀವಶಾಸ್ರ್ತ ) ಮತ್ತು 20 ಪ್ರಶ್ನೆಗಳು (ಗಣಿತವಿಷಯವನ್ನುಆಧರಿಸಿರುತ್ತವೆ.) ಪ್ರತಿಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಜಿಲ್ಲಾವಾರು, ಪ್ರವರ್ಗವಾರು rank ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.

ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿಆಯ್ಕೆಯಾದವರಿಗೆ 9 ನೇ ತರಗತಿಯಿಂದ ತಿಂಗಳಿಗೆ ರೂ 1000 ರಂತೆ ವರ್ಷಕ್ಕೆ 12,000/- ಗಳಂತೆ 4 ವರ್ಷಗಳು ವಿದ್ಯಾರ್ಥಿವೇತನ ಸಿಗುತ್ತದೆ. (ದ್ವಿತೀಯಪಿ.ಯು.ಸಿಯವರೆಗೆ)

ವಿದ್ಯಾರ್ಥಿವೇತನ ವಿತರಣೆ :-ಆಯ್ಕೆಯಾದ ವಿದ್ಯಾರ್ಥಿಗಳ ಹೆಸರಿನಲ್ಲಿ ತೆರೆಯುವ ಬ್ಯಾಂಕ್, ಖಾತೆಗೆ ನೇರವಾಗಿ ಎಸ್.ಬಿ.ಐ, ನವದೆಹಲಿಯಿಂದ ವಿದ್ಯಾರ್ಥಿ ವೇತನ ಜಮಾ ಆಗುತ್ತದೆ.

ವಿದ್ಯಾರ್ಥಿ ವೇತನ ಮುಂದುವರಿಕೆಗೆ ನಿಬಂಧನೆಗಳು: NMMS ಪರೀಕ್ಷೆಯಲ್ಲಿ ಆಯ್ಕೆಯಾದ ಮೇಲೆ ವಿದ್ಯಾರ್ಥಿವೇತನ ಮುಂದುವರಿಕೆಗೆ ಶೈಕ್ಷಣಿಕ ಹಿರಿಮೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೆಳಗಿನ ನಿಬಂಧನೆಗಳನ್ನು ಒಳಗೊಂಡಿರುತ್ತದೆ.

 • ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು 9, 11 ಮತ್ತು 12 ನೇತರಗತಿಗಳಲ್ಲಿ ಕನಿಷ್ಟ ಶೇ55 ರಷ್ಟು ಮತ್ತು 10 ನೇತರಗತಿಯಲ್ಲಿ ಕನಿಷ್ಟ ಶೇ60 ರಷ್ಟು ಅಂಕಗಳನ್ನು ಗಳಿಸಲೇಬೇಕಾಗುತ್ತದೆ. (ಪ.ಜಾತಿ / ಪ. ಪಂ ವಿದ್ಯಾರ್ಥಿಗಳಿಗೆಶೇ5 ರಷ್ಟುವಿನಾಯಿತಿನೀಡಲಾಗುತ್ತದೆ.) MHRD, ನವದೆಹಲಿ ರವರ ಸೂಚನೆಯಂತೆ ನಿಬಂಧನೆಗಳು ಆಗಿಂದಾಗ್ಗೆ ಬದಲಾಗುತ್ತವೆ.
 • ಆಯ್ಕೆಯಾದವಿದ್ಯಾರ್ಥಿಗಳು ಸರ್ಕಾರಿ ಹಾಗೂ ಅನುದಾನಿತಶಾಲೆ / ಕಾಲೇಜಿನಲ್ಲಿ ಮಾತ್ರ ವಿದ್ಯಾಭ್ಯಾಸ ಮುಂದುವರಿಸಬೇಕು.
 • ITI ಹಾಗೂ Diploma ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವುವರು ವಿದ್ಯಾರ್ಥಿವೇತನಕ್ಕೆಅರ್ಹರಾಗಿರುವುದಿಲ್ಲ.

 

ಇತ್ತೀಚಿನ ನವೀಕರಣ​ : 23-09-2021 09:47 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತುಮಕೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080